Saturday, 25 July 2020

ಅಸೈನ್ ಮೆಂಟ್ 9


ಸದರಿ ಮನೆಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತು ಲೇಖನ

ಶಿಕ್ಷಕ ನೆಂಬುವನು ನಿರಂತರ ವಿದ್ಯಾರ್ಥಿ ತನ್ನ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ನಿಂತ ನೀರಿನಂತಿರದೆ ಹರಿಯುವ ಶುದ್ಧ ನೀರಿನಂತೆ ಆಗಲು ದಿನನಿತ್ಯ ಅಧ್ಯಾಯನ ಶೀಲನಾಗುವುದು ಅಗತ್ಯ . ಬದಲಾಗುವ ಕಾಲಘಟ್ಟದಲ್ಲಿ ಶಿಕ್ಷಕರು ಬದಲಾವಣೆಗೆ ಒಡ್ಡಿಕೊಳ್ಳಬೇಕು. ಶಿಕ್ಷಕ ತನ್ನ ಬೋಧನೆಯನ್ನು ಪರಿಣಾಮಕಾರಿಯಾಗಿಸಲು ಹೊಸ-ಹೊಸ ವಿಧಾನಗಳನ್ನು, ಪ್ರಚಲಿತ ವಿದ್ಯಮಾನಗಳನ್ನು ಹಾಗೂ ಹೊಸ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಬದಲಾಗಬೇಕಾದ ಅನಿವಾರ್ಯತೆ ಇದೆ.
ಪ್ರಸಕ್ತ ನಾವು ಡಿಜಿಟಲ್ ಯುಗದಲ್ಲಿ ನಾವಿದ್ದೇವೆ. ಇ-ಕ್ರಾಂತಿಯ ಸಮಯದಲ್ಲಿ ಶಿಕ್ಷಕರಾದ ನಾವುಗಳು ನಮ್ಮ ವೃತ್ತಿ ನೈಪುಣ್ಯ ತೆಗಾಗಿ ಹೊಸ ಹೊಸ ತಂತ್ರಜ್ಞಾನ ಆಧಾರಿತ ವಿಧಾನಗಳನ್ನು ಕಲಿಯಬೇಕಾಗಿದೆ.
ಡಿಜಿಟಲ್ ತಂತ್ರಜ್ಞಾನಗಳಾದ ಅಂತರ್ಜಾಲಗಳು, ಯೂಟ್ಯೂಬ್, ಬ್ಲಾಗ್, ಡಿಜಿಟಲ್ ಕ್ಲಾಸ್ ರೂಮ್ ಗಳ ಮೂಲಕ ಅನೇಕ ವಿಷಯಗಳನ್ನು ಮನೆಯಿಂದಲೇ ಅಧ್ಯಯನ ಮಾಡಬಹುದಾಗಿದೆ. ಶಿಕ್ಷಕರು ತಂತ್ರಜ್ಞಾನದ ಮೂಲಕ ಮನೆಯಿಂದಲೇ ಮಕ್ಕಳಿಗೆ ಬೋಧನೆ ಮಾಡಬಹುದಾಗಿದೆ.
ಶಿಕ್ಷಕನು ಇಂದಿನ ವಿದ್ಯಾಮಾನಗಳ ಹಾಗೂ ಹೊಸ ಹೊಸ ಬೋಧನಾ ವಿಧಾನಗಳ ಮಾಹಿತಿಗಾಗಿ ಶಿಕ್ಷಕರ ತರಬೇತಿ ಬಹುಮುಖ್ಯ, ಇಂದಿನ ವಿಷಮ ಪರಿಸ್ಥಿತಿಯಲ್ಲಿ ಇಲಾಖೆ ಆಯೋಜಿಸಿದ ಆನ್ಲೈನ್ ಶಿಕ್ಷಕರ ತರಬೇತಿಯಲ್ಲಿ ಭಾಗವಹಿಸಿ ತನ್ನ ವೃತ್ತಿಯನ್ನು ಜೀವಂತವಾಗಿ ಇಟ್ಟುಕೊಳ್ಳಬಹುದು ಅಲ್ಲದೆ ಬೋಧನೆಗೆ ನೆರವಾಗಬಲ್ಲ ಪುಸ್ತಕಗಳನ್ನು ಓದುವುದು ಚರ್ಚೆಯಲ್ಲಿ ಭಾಗವಹಿಸುವುದರ ಮೂಲಕ ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

No comments:

Post a Comment

ಅಸೈನ್ಮೆಂಟ್ -5