Saturday, 25 July 2020

ಅಸೈನ್ ಮೆಂಟ್ 10


ಕೋವಿಡ್19ರ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆಯನ್ನು ಉತ್ಕೃಷ್ಟಗೊಳಿಸಲು ನನ್ನ ಸಲಹೆ ಸೂಚನೆಗಳು

ಇಂದು ಕೋವಿಡ್19 ವೈರಸ್ ಜಗತ್ತನ್ನು ತಲ್ಲಣಗೊಳಿಸಿದೆ. ಇಂತಹ ವಿಷಮ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಲಿದೆ.
ಜಗತ್ತಿನ ಬಹುತೇಕ ತಜ್ಞವೈದ್ಯರ ಅಭಿಪ್ರಾಯದಂತೆ ಈ ವೈರಸ್ ರೋಗವು ಮಕ್ಕಳಿಗೆ ಅಷ್ಟೇನೂ ಪರಿಣಾಮ ಬೀರದು ಹಾಗೂ ಮಕ್ಕಳು ಈ ರೋಗವನ್ನು ಹಬ್ಬಿಸುವ ವಾಹಕಗಳು ಆಗಲಾರರು ಎಂದು ಹೇಳಿದ್ದಾರೆ. ಆದ್ದರಿಂದ ಶಾಲೆಗಳನ್ನು ಪ್ರಾರಂಭಿಸಿ ಎಂಬುದು ಬಹುತೇಕ ತಜ್ಞವೈದ್ಯರ ಅಭಿಪ್ರಾಯವಾಗಿದೆ . ಇಂತಹ ಸಮಯದಲ್ಲಿ ಒಂದು ವೇಳೆ ಶಾಲೆ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದರೆ ನನ್ನ ಕೆಲವು ಸಲಹೆ ಸೂಚನೆಗಳು ಇಂತಿವೆ.

  • ಮಕ್ಕಳಿಗೆ ಮತ್ತು ಪೋಷಕರಿಗೆ ರೋಗದ ಬಗ್ಗೆ ಮುಂಜಾಗ್ರತ ಕ್ರಮವನ್ನು ತಿಳಿಸುವುದು.
  • ವೈರಸ್ ನಿಯಂತ್ರಿಸುವ ಮುಂಜಾಗ್ರತಾ ಕ್ರಮಗಳಾದ ಸಾಮಾಜಿಕ ಅಂತರ ಆಗಾಗ ಕೈಗಳನ್ನು  ಸ್ವಚ್ಛಗೊಳಿಸುವುದು ಕಡ್ಡಾಯವಾಗಿ ಮಾಸ್ಕನ್ನು ಧರಿಸುವುದು.
  • ಶಾಲಾ ಸ್ವಚ್ಛತೆ ಸ್ಯಾನಿಟರೈಸ್ ಮಾಡುವುದು.
  • ಶಿಕ್ಷಕರು ಮಕ್ಕಳು ಇರುವಲ್ಲಿಯೇ ಹೋಗಿ ಶಿಕ್ಷಣ ಕೊಡುವುದು.
  • ಎಂಟ ರಿಂದ ಹತ್ತು ಮಕ್ಕಳನ್ನೊಳಗೊಂಡ ಬೀದಿ ಶಾಲೆಗಳನ್ನು ಪ್ರಾರಂಭಿಸುದು.
  • ಶಾಲಾ ಸಮಯವನ್ನು ಕಡಿಮೆ ಮಾಡಿ ಪಾಳಿ ಪದ್ಧತಿಯನ್ನು ಅನುಸರಿಸುವುದು.
  • ಮಕ್ಕಳ  ಪೋಷಕರಲ್ಲಿ ಕರೋನವೈರಸ್ ಬಗ್ಗೆ ಇರುವ ಭಯವನ್ನು ಹೋಗಲಾಡಿಸುವುದು.
  • ಶಾಲಾ ಪಠ್ಯಕ್ರಮವನ್ನು ಕಡಿತಗೊಳಿಸುವುದು.

No comments:

Post a Comment

ಅಸೈನ್ಮೆಂಟ್ -5